31 ಅಕ್ಟೋಬರ್, 2009

ರಾಜ್ಯಾತ್ಸವಕ್ಕೆ ಬಿಜೆಪಿ ಕೊಡುಗೆ

ಅಕ್ಟೋಬರ‍್ 31, 2009

ಸಮಗ್ರ ಕರ್ನಾಟಕ ರಾಜ್ಯ ಉದಯವಾಗಿ, "ಉತ್ತರ ಕರ್ನಟಕ", "ಹಳೆ ಮೈಸೂರು" ಎಂಬ ತಾಕಲಾಟದಲ್ಲೇ 52 ವರ್ಷ ಪೂರೈಸಿದೆ. ಈ ವಿಚ್ಛಿದ್ರತೆಯನ್ನು ರಾಜಕಾರಣಿಗಳು ಜತನದಿಂದ ಕಾಪಾಡಿಕೊಂಡುಬಂದಿದ್ದಾರೆ. ಈ ಪೈಕಿ ಉತ್ತರ ಕರ್ನಾಟಕವೆನ್ನುವ ಭಾಗ ಅಭೂತಪೂರ್ವ ನೆರೆಯಿಂದ ತತ್ತರಿಸಿ, ಜನ, ಇದ್ದಬದ್ದಿದ್ದನ್ನೆಲ್ಲಾ ಕಳೆದುಕೊಂಡು ಗುಟುಕು ಗಂಜಿಗೂ ಹಾತೊರೆಯುತ್ತರುವ ಸಂದರರ್ಭದಲ್ಲೇ, ಅವರಿಗೆ ಸೂರು, ಊರುಗಳನ್ನು ನಿರ್ಮಿಸಿಕೊಡುತ್ತೇವೆಂಬ ಢೊಂಗಿಯ ನೆಪದಲ್ಲೇ, ಘನ ರಾಜಕಾರಣಿಗಳು, ಒಬ್ಬರಮೇಲೊಬ್ಬರು ಕೆಸರೆರೆಚುತ್ತಾ ಪರಸ್ಪರ ಎದುರಾಳಿಗಳನ್ನು ಕೆಸರಿನಲ್ಲಿ ಬೀಳಿಸುವ ಕಾಯಕದಲ್ಲಿ ತೊಡಗಿರುವುದು ಲಜ್ಜಾಸ್ಪದ.
ವಿಚ್ಛಿದ್ರ ರಾಜಕೀಯ ಮತ್ತು ಅದರ "ಕೂಡುವಳಿ" ಸಂತಾನದ "ಅಕ್ರಮ" ಸರಕರದ ವ್ಯವಸ್ಥೆಯಿಂದ ಬೇಸತ್ತಿದ್ದ ನಾಡಿನ ಮರ್ಯಾದಸ್ಥ ಜನತೆ ಈ ಬಾರಿ ಬಜೆಪಿಗೆ ಬಹುತೇಕ ಬಹುಮತ ನೀಡಿತ್ತು; ಆರ್ಥಿಕವಾಗಿ ಅಲ್ಲದಿದ್ದರೂ "ನೈತಿಕ"ವಾಗಿಯಾದರೂ ಇದರಿಂದ ದೊಡ್ಡ ನಿರಿಕ್ಷೆ ಇಟ್ಟುಕೊಂಡಿತ್ತು. ಆದರೆ ಈಗ ಪಕ್ಷ ಕೇಂದ್ರದಲ್ಲಿ ಮೀಸೆ ಮಣ್ಣು ಮಾಡಿಕೊಂಡ ಹಿನ್ನೆಲೆಯಲ್ಲಿ, ಹೈಕಮಾಂಡ್‌ ಎನ್ನುವುದು ಬಿಗಿ ಕಳೆದುಕೊಂಡಿದ್ದರಿಂದಲೋ ಏನೋ, ಇಲ್ಲಿನ ಬಣ-ಬಣಗಳು, ಅದುಮಿಟ್ಟ ಆಶೆ-ಆಕಾಂಕ್ಷೆಗಗಳನ್ನು ಸಿಡಿಮದ್ದು ಮಾಡಿಕೊಂಡು, "ನೀನೆಷ್ಟು" ತಾನೆಷ್ಟು" ಕಾಳಗದಲ್ಲಿ ತೊಡಗಿವೆ! ರಾಜಭವನವೂ ಬಿಕ್ಕಟ್ಟಿನ ಮೇಲೆ ಕಣ್ಣಿಟ್ಟು ಮಾನವೀಯವಾದ ಪ್ರವಾಹ ಪರಿಹಾರವನ್ನೇ ನೆಪಮಾಡಿಕೊಂಡು ಹೊಂಚು ಹಾಕುವಂತೆ, ಸಂಚು ರೂಪಿಸುವಂತೆ ವಿದ್ಯಮಾನಗಳೇರ್ಪಟ್ಟಿದೆ ಇದು ಕರ್ನಾಟಕದ ಜನತೆಗೆ ಬಿಜೆಪಿಯ ರಾಜ್ಯಾತ್ಸವದ "ಅಶುಭಾಶಯ"ವೇ?

ಕರೆ: 9448047559

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ