31 ಅಕ್ಟೋಬರ್, 2009

ರಾಜ್ಯಾತ್ಸವಕ್ಕೆ ಬಿಜೆಪಿ ಕೊಡುಗೆ

ಅಕ್ಟೋಬರ‍್ 31, 2009

ಸಮಗ್ರ ಕರ್ನಾಟಕ ರಾಜ್ಯ ಉದಯವಾಗಿ, "ಉತ್ತರ ಕರ್ನಟಕ", "ಹಳೆ ಮೈಸೂರು" ಎಂಬ ತಾಕಲಾಟದಲ್ಲೇ 52 ವರ್ಷ ಪೂರೈಸಿದೆ. ಈ ವಿಚ್ಛಿದ್ರತೆಯನ್ನು ರಾಜಕಾರಣಿಗಳು ಜತನದಿಂದ ಕಾಪಾಡಿಕೊಂಡುಬಂದಿದ್ದಾರೆ. ಈ ಪೈಕಿ ಉತ್ತರ ಕರ್ನಾಟಕವೆನ್ನುವ ಭಾಗ ಅಭೂತಪೂರ್ವ ನೆರೆಯಿಂದ ತತ್ತರಿಸಿ, ಜನ, ಇದ್ದಬದ್ದಿದ್ದನ್ನೆಲ್ಲಾ ಕಳೆದುಕೊಂಡು ಗುಟುಕು ಗಂಜಿಗೂ ಹಾತೊರೆಯುತ್ತರುವ ಸಂದರರ್ಭದಲ್ಲೇ, ಅವರಿಗೆ ಸೂರು, ಊರುಗಳನ್ನು ನಿರ್ಮಿಸಿಕೊಡುತ್ತೇವೆಂಬ ಢೊಂಗಿಯ ನೆಪದಲ್ಲೇ, ಘನ ರಾಜಕಾರಣಿಗಳು, ಒಬ್ಬರಮೇಲೊಬ್ಬರು ಕೆಸರೆರೆಚುತ್ತಾ ಪರಸ್ಪರ ಎದುರಾಳಿಗಳನ್ನು ಕೆಸರಿನಲ್ಲಿ ಬೀಳಿಸುವ ಕಾಯಕದಲ್ಲಿ ತೊಡಗಿರುವುದು ಲಜ್ಜಾಸ್ಪದ.
ವಿಚ್ಛಿದ್ರ ರಾಜಕೀಯ ಮತ್ತು ಅದರ "ಕೂಡುವಳಿ" ಸಂತಾನದ "ಅಕ್ರಮ" ಸರಕರದ ವ್ಯವಸ್ಥೆಯಿಂದ ಬೇಸತ್ತಿದ್ದ ನಾಡಿನ ಮರ್ಯಾದಸ್ಥ ಜನತೆ ಈ ಬಾರಿ ಬಜೆಪಿಗೆ ಬಹುತೇಕ ಬಹುಮತ ನೀಡಿತ್ತು; ಆರ್ಥಿಕವಾಗಿ ಅಲ್ಲದಿದ್ದರೂ "ನೈತಿಕ"ವಾಗಿಯಾದರೂ ಇದರಿಂದ ದೊಡ್ಡ ನಿರಿಕ್ಷೆ ಇಟ್ಟುಕೊಂಡಿತ್ತು. ಆದರೆ ಈಗ ಪಕ್ಷ ಕೇಂದ್ರದಲ್ಲಿ ಮೀಸೆ ಮಣ್ಣು ಮಾಡಿಕೊಂಡ ಹಿನ್ನೆಲೆಯಲ್ಲಿ, ಹೈಕಮಾಂಡ್‌ ಎನ್ನುವುದು ಬಿಗಿ ಕಳೆದುಕೊಂಡಿದ್ದರಿಂದಲೋ ಏನೋ, ಇಲ್ಲಿನ ಬಣ-ಬಣಗಳು, ಅದುಮಿಟ್ಟ ಆಶೆ-ಆಕಾಂಕ್ಷೆಗಗಳನ್ನು ಸಿಡಿಮದ್ದು ಮಾಡಿಕೊಂಡು, "ನೀನೆಷ್ಟು" ತಾನೆಷ್ಟು" ಕಾಳಗದಲ್ಲಿ ತೊಡಗಿವೆ! ರಾಜಭವನವೂ ಬಿಕ್ಕಟ್ಟಿನ ಮೇಲೆ ಕಣ್ಣಿಟ್ಟು ಮಾನವೀಯವಾದ ಪ್ರವಾಹ ಪರಿಹಾರವನ್ನೇ ನೆಪಮಾಡಿಕೊಂಡು ಹೊಂಚು ಹಾಕುವಂತೆ, ಸಂಚು ರೂಪಿಸುವಂತೆ ವಿದ್ಯಮಾನಗಳೇರ್ಪಟ್ಟಿದೆ ಇದು ಕರ್ನಾಟಕದ ಜನತೆಗೆ ಬಿಜೆಪಿಯ ರಾಜ್ಯಾತ್ಸವದ "ಅಶುಭಾಶಯ"ವೇ?

ಕರೆ: 9448047559

28 ಅಕ್ಟೋಬರ್, 2009

ಸಮಾಜ-ರಾಜಕೀಯ-ಮತ್ತು -ಸ್ವಾಮಿಗಳು

ಅಕ್ಟೋಬರ‍್ 29,2009
ಶೆಟ್ಟರ‍್ ಸ್ವಾಮೀಜೀ ಭೇಟಿ
"ಸಂಕಟ ಬಂದಾಗ ವೆಂಕಟರಮಣ". ಯಾವುದೇ ಕಷ್ಟ ಎದುರಾದಾಗಲೂ ದೈವದ ಮರೆಹೋಗುವುದು ಸ್ವಾಭಾವಿಕ. ಇದು ದೈವಶ್ರದ್ಧೆಯೋ, ಕೈಲಾಗದವರ ನಿಸ್ಸಹಯಕತೆಯೋ ಇರಬಹುದು; ಅದು ಅರವರ ವೈಯಕ್ತಿಕ. ಆದರೆ ಸಾರ್ವಜನಿಕ ಜೀವನದ ಮುತ್ಸದ್ದಿ ಮಹೋದಯರು, ಜಗಜ್ಜಾಹೀರಾಗಿ ಇದನ್ನು ಐನು ರಾಜಕೀಯ ಮಾಡಿಕೊಳ್ಳಬಹುದೇ?
ಸ್ವಾಮಿಗಳಾದವರು, ತಪೋನಿಷ್ಠರೂ ಸತ್ಯದರ್ಶಿಗಳೂ ಎಂದು ಸಮಾಜದ ನಂಬಿಕೆಗೆ ಪಾತ್ರರಾದವರು, ಶರಣುಬಂದ ಶಿಷ್ಯರ ನೋವಿಗೆ ಸಾಂತ್ವನ ಹೇಳಿ, ತಪ್ಪು-ಪಾಪಗಳಿಂದ ಅವರಿಗೆ ಸರಿದಾರಿ ತೋರುವುದು ಅವರ ಅಸ್ತಿತ್ವದ ಸಾರ್ಥಕತೆ. ಆದರೆ ಸರಕಾರವೊಂದನ್ನು ಉರುಳಿಸುವ ಅಥವಾ ನೆಲೆ ನಿಲ್ಲಿಸುವ ರಾಜಕೀಯ ತಂತ್ರಗಾರಿಕೆಯ ತೊಡುಕುಗಳಿಗೆ ಅವರು ಸಮಾಧಾನ ಕಂಡುಹಿಡಿಯುವುದು ಉಚಿತವೂ "ಕಸಬುದಾರಿಕೆ"ಯೂ-professionalism-ಎನಿಸೀತೇ?
ಶೆಟ್ಟರು ಬಹಿರಂಗವಾಗಿ ಸುತ್ತೂರು ಸ್ವಾಮಿಗಳನ್ನು ಭೇಟಿ ಮಾಡಿದಂತೆ ಯಡಿಯೂರಪ್ಪನವರು ಮತ್ತೋರ್ವ ಸ್ವಾಮಿಗಳನ್ನೂ, ಸಿದ್ಧರಾಮಯ್ಯನವರು, ಇನ್ನೊಬ್ಬ ಸ್ವಾಮಿಗಳನ್ನೂ, ಕುಮಾರಸ್ವಾಮಿಯವರು ಬೇರೆಯವರನ್ನೂ ಸಂದರ್ಶಿಸಿದರೆ ಮತ್ತು ಯಥಾಸಹಜವಾಗಿ ಘಟಿಸುವ ರಾಜಕೀಯ ವಿದ್ಯಮಾನದಲ್ಲಿ ಒಬ್ಬರಿಗೆ ಮೇಲುಗೈ, ಇನ್ನೊಬ್ಬರಿಗೆ ಸೋಲೂ ಉಂಟಾದರೆ, ಅದನ್ನು ಆಯಾಯಾ ಮಠಗಳು ಪ್ರತಿಪಾದಿಸುವ ಆಧ್ಯಾತ್ಮಿಕ ತತ್ವ-ಸಿದ್ಧಾಂತಗಳ ಸೋಲು-ಗೆಲುವೆಂದು ಸಾಮಾನ್ಯರು ಒಪ್ಪಿಕೊಳ್ಳಬೇಕೇ?!

ಕರೆ: 9448047559 ವಿ-ಅಂಚೆ ಬ್ಲಾಗ್

27 ಅಕ್ಟೋಬರ್, 2009

ಪ್ರಜಸತ್ತೆಯೋ? ಪಾಳೇಗಾರಿಕೆಯೋ?

ಅಕ್ಟೋಬರ‍್ 28, 2009
ಪ್ರಜಾಸತ್ತೆಯೋ? ಪಾಳೇಗಾರಿಕೆಯೋ?
ಆಡಳಿತ ಬಿಜೆಪಿ ರಾಜ್ಯ ಘಟಕದಲ್ಲಿನ ಭಿನ್ನಮತ, ಪಕ್ಷ, ರಾಷ್ಟ್ರ ಮಟ್ಟದಲ್ಲಿ ಸೋತು ಸುಣ್ಣವಗಿರುವ ಸಂದರ್ಭದಲ್ಲಿ ರಾಜಾರೋಷವಾಗಿ ಭುಗಿಲೆದ್ದಿರುವುದು ಸಹಜ ಪ್ರಕ್ರಿಯೆ. ಭಿನ್ನಮತೀಯ ಎನ್ನಲಾದ ಬಣ, ಮಂಗಳವಾರದ ಬೆಳವಣಿಗೆಯಲ್ಲಿ ಮೆರೆದ ದರ್ಪವನ್ನು ನೋಡಿದರೆ, ಮುಖ್ಯಮಂತ್ರಿಗಳು ಇಷ್ಟುದಿನ "ಪ್ರದರ್ಶಿಸಿದ" ತ್ಯಾಗಶೀಲತೆ, ಪ್ರಾಮಾಣಿಕತೆಗಳೆಲ್ಲಾ ಕೇವಲ ವೈಯಕ್ತಿಕ ಶ್ರೇಷ್ಠತೆಯೂ ರಾಜಕೀಯವಾಗಿ ವ್ಯರ್ಥ ಸ್ಟ್ರಾಟಜಿಯು ಆದಂತೆನಿಸತೊಡಗಿದೆ. ಇದೇನಿದ್ದರೂ ಜನನ್ನು ಮರಳು ಮಾಡುವ ವಿಧನವಿರಹುದು, ಆದರೆ ಮುತ್ಸದ್ದಿ ಮಹೋದಯ ಸಹೋದ್ಯೋಗಿಗಳು ಸೊಪ್ಪು ಹಾಕಿಯಾರೇ?! ಚುನಾವಣೆಯಲ್ಲಿ, ಯಾವುದೋ ಭ್ರಮೆಯಿಂದ ಒಂದು ಪಕ್ಷದ ಕೈಹಿಡಿದು ಮೇಲೆತ್ತಿದ ಜನಸಾಮಾನ್ಯರು, ಚುನಾಣಾಧಿಕಾರಿ ಫಲಿತಾಂಶ ಘೊಷಿಸಿದ ಮರುಕ್ಷಣದಲ್ಲೇ ಅಮಾನ್ಯರಾಗಿಬಿಡುತ್ತಾರೆ. ಆ ನಂತರ ಅನ್ಯಾಯದ ವಿರುದ್ಧ ಅವರ ಅಳಲು, ಅಬ್ಬರಗಳೇನಿದ್ದರೂ ಅರಣ್ಯರೋಧನವಾಗಿಬಿಡುತ್ತದೆ. ಬಣ ಬಣದ ಮೇಲಾಟದ ಹೆಸರಿನಲ್ಲಿ ಶಾಸಕರನ್ನು ಬಿಡ್ ಮಾಡಿ ಕೊಳ್ಳಬಲ್ಲ ಪಾಳೇಗಾರರು ಅಧಿಪತಿಗಳಾಗುತ್ತಾರೆ. ನಾವೂ-ನೀವೂ ಕಮಕ್-ಕಿಮಕ್‌ ಎನ್ನುವಂತಿಲ್ಲ!
ಆರ‍್. ಕೆ. ದಿವಾಕರ
ಕರೆ: 9448047559 ವಿ-ಅಂಚೆ
ಬ್ಲಾಗ್

26 ಅಕ್ಟೋಬರ್, 2009

"ಲವ್ ಜಿಹಾದ್ ತನಿಕೆ"-

ಅಕ್ಟೋಬರ‍್ 27, 2009
"ಲವ್‌ ಜಿಹಾದ್" ಪೊಲೀಸ್ ತನಿಖೆ ಸ್ವಾಗತಾರ್ಹ
ಮತಾಂತರದ ಇನ್ನೊಂದು ಅಷಡ್ಡಾಳವಾದ "ಲವ್‌ ಜಿಹಾದ್" ಬಗ್ಗೆ ರಾಜ್ಯ ಸರಕಾರ ಪೊಲೀಸ್ ತನಿಖೆ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮ. ಆದರೆ ಇದರ ಫಲಶೃತಿ ಪೂರ್ವನಿರ್ಧಾರವೆಂಬಂತೆ, ಅಧಿಕಾರಸ್ಥರ ಪೂರ್ವಗ್ರಹವನ್ನಷ್ಟೇ ಎತ್ತಿಹಿಡಿಯಬಾರದು. ಲಾಗಾಯ್ತಿನಿಂದ ನಡೆದುಬಂದಿರುವ ಮತಾಂತರದ ಕುತಂತ್ರಕ್ಕೆ, "ಲವ್ ಜಿಹಾದ್" ಒಂದು ಹೊಸ Innovation ಅಷ್ಟೆ! ಒಟ್ಟಾರೆ ಮತಾಂತರದ ಉದ್ದೇಶ, ಅದರ ಲಾಭನಷ್ಟಗಳ ರಾಜಕೀಯ ಮತ್ತು ಇದಕ್ಕಾಗಿ ಗುಪ್ತವಾಗಿ, ಪ್ರಕಟವಾಗಿ ನಡೆಯುವ ಸಂಘಟನಾ ಕಾರ್ಯವೈಖರಿ ಬಗ್ಗೆ, ಸಮಿತಿ, ವ್ಯಾಪಕ ಸಂಶೋಧನೆ ನಡೆಸಿ ಪ್ರಾಮಾಣಿಕ ವರದಿ ನೀಡುವುದಾದರೆ ಇಡೀ ದೇಶವೇ ನೈತಿಕ, ಸಾಮಾಜಿಕ ಪಿಡಗೊಂದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಾಯವಾದೀತು!
ಜನಸಾಮನ್ಯರ ಮಟ್ಟದಲ್ಲಿ, ಮತ ಮತ್ತು ಮತಾಂತರ "ಮಂಕುಬೂದಿ" ಮಾತ್ರಾ. ಅದನ್ನು ಎರಚುವವರು ಕುತಂತ್ರೀ ಪಟ್ಟಭದ್ರರು. ರಾಜಕಾರಣಿಗಳು ಒಟ್ಟಾರೆಯಾಗಿ ಕುತಂತ್ರಿಗಳೂ ಹೌದು; ಪಟ್ಟಭದ್ರರೂ ಹೌದು.ಸಮಾಜವನ್ನು ಒಡೆಯುವುದು; Winning margin ವೋಟು ಬಾಚಿಕೊಳ್ಳುವುದು; ಅಷ್ಟೇ ಅವರ ನೀತಿ-ಧರ್ಮ-ಸೂತ್ರ-ಸಂಹಿತೆಗಳೆಲ್ಲಾ. ಮೂರ್ಖ ಜನರ ಮತಿಗೆ ಬತ್ತಿಯಿಟ್ಟು, ಹುಚ್ಚೆಬ್ಬಿಸಿ ಆ ಕಿಚ್ಚಿನಲ್ಲವರು ಸುಲಭವಾಗಿ ತಮ್ಮ ಬೇಳೆ ಬೇಸಿಕೊಳ್ಳುತ್ತಾರೆ. ಒಂದುಕಡೆಯವರು, Fairnessಗೆ ತಿಲಂಜಲಿಯಿತ್ತು ಅಲ್ಪಸಂಖ್ಯಾತರನ್ನು ಓಲೈಸಿಕೊಂಡರೆ, ಇನ್ನೊಂದು ಬದಿಯವರು ಅವರಲ್ಲಿ ಭೀತಿ, ಅಸುರಕ್ಷಿತಾಭಾವ ಹುಟ್ಟಿಸಿ ಬಹುಸಂಖ್ಯಾತರಿಂದ "ಭೇಷ್‌" ಎನಿಸಿಕೊಳ್ಳುವ ಹುನ್ನಾರ ಹೂಡುತ್ತಾರೆ. ವಾಸ್ತವವಾಗಿ ಇಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎನ್ನುವುದೇ ಮಿಥ್ಯೆ. ಅವರೆಲ್ಲಾ ಇದೇ ದೇಶದ ಹಳ್ಳಿ-ಹಳ್ಳಿಗಳ ಮಣ್ಣಿನಲ್ಲೇ ಹುಟ್ಟಿಬೆಳೆದವರು; ಮೂಲಭೂತವಾಗಿ ಒಂದೇ ಸಂಸ್ಕೃತಿ-ಆಚಾರಗಳನ್ನೂ, ಸಾಮಾಜಿಕತೆಯನ್ನೂ ಭೌತ ಪರಿಸರವನ್ನೂ ಹಂಚಿಕೊಂಡವರು! ಭಾರತೀಯರಾದವರಿಗೆ ಒಂದು ಭಾರತ ದೇಶವಿದೆ. ಹೇಳಿ, ಮುಸಲ್ಮಾನರಿಗಾಗಲೀ, ಕ್ರಿಶ್ಚಿಯನ್ನರಿಗಾಗಲೀ ವಿಶಿಷ್ಟ ರಾಷ್ಟ್ರೀಯತೆ ಕರುಣಿಸುವ ಒಂದು ದೇಶವಿದೆಯೇ?
ರಾಜ್ಯ ಸರಕಾರವೊಂದರ ಉನ್ನತೋನ್ನತ ಅಧಿಕಾರಿಗಳ ಸಮಿತಿ ಇಷ್ಟು ವಿಶಾಲವಾಗಿ ಆಲೋಚಿಸಬಲ್ಲ ಸಾಮರ್ಥ್ಯವನ್ನಾಗಲೀ, ಸ್ವಾತಂತ್ಯ್ರವನ್ನಾಗಲೀ ಹೊಂದಿರಬಹುದೇ?
ಆರ‍್. ಕೆ ದಿವಾಕರ
ಕರೆ: 9448047559 ವಿ-ಅಂಚೆ
ಬ್ಲಾಗ್‌