28 ಅಕ್ಟೋಬರ್, 2009

ಸಮಾಜ-ರಾಜಕೀಯ-ಮತ್ತು -ಸ್ವಾಮಿಗಳು

ಅಕ್ಟೋಬರ‍್ 29,2009
ಶೆಟ್ಟರ‍್ ಸ್ವಾಮೀಜೀ ಭೇಟಿ
"ಸಂಕಟ ಬಂದಾಗ ವೆಂಕಟರಮಣ". ಯಾವುದೇ ಕಷ್ಟ ಎದುರಾದಾಗಲೂ ದೈವದ ಮರೆಹೋಗುವುದು ಸ್ವಾಭಾವಿಕ. ಇದು ದೈವಶ್ರದ್ಧೆಯೋ, ಕೈಲಾಗದವರ ನಿಸ್ಸಹಯಕತೆಯೋ ಇರಬಹುದು; ಅದು ಅರವರ ವೈಯಕ್ತಿಕ. ಆದರೆ ಸಾರ್ವಜನಿಕ ಜೀವನದ ಮುತ್ಸದ್ದಿ ಮಹೋದಯರು, ಜಗಜ್ಜಾಹೀರಾಗಿ ಇದನ್ನು ಐನು ರಾಜಕೀಯ ಮಾಡಿಕೊಳ್ಳಬಹುದೇ?
ಸ್ವಾಮಿಗಳಾದವರು, ತಪೋನಿಷ್ಠರೂ ಸತ್ಯದರ್ಶಿಗಳೂ ಎಂದು ಸಮಾಜದ ನಂಬಿಕೆಗೆ ಪಾತ್ರರಾದವರು, ಶರಣುಬಂದ ಶಿಷ್ಯರ ನೋವಿಗೆ ಸಾಂತ್ವನ ಹೇಳಿ, ತಪ್ಪು-ಪಾಪಗಳಿಂದ ಅವರಿಗೆ ಸರಿದಾರಿ ತೋರುವುದು ಅವರ ಅಸ್ತಿತ್ವದ ಸಾರ್ಥಕತೆ. ಆದರೆ ಸರಕಾರವೊಂದನ್ನು ಉರುಳಿಸುವ ಅಥವಾ ನೆಲೆ ನಿಲ್ಲಿಸುವ ರಾಜಕೀಯ ತಂತ್ರಗಾರಿಕೆಯ ತೊಡುಕುಗಳಿಗೆ ಅವರು ಸಮಾಧಾನ ಕಂಡುಹಿಡಿಯುವುದು ಉಚಿತವೂ "ಕಸಬುದಾರಿಕೆ"ಯೂ-professionalism-ಎನಿಸೀತೇ?
ಶೆಟ್ಟರು ಬಹಿರಂಗವಾಗಿ ಸುತ್ತೂರು ಸ್ವಾಮಿಗಳನ್ನು ಭೇಟಿ ಮಾಡಿದಂತೆ ಯಡಿಯೂರಪ್ಪನವರು ಮತ್ತೋರ್ವ ಸ್ವಾಮಿಗಳನ್ನೂ, ಸಿದ್ಧರಾಮಯ್ಯನವರು, ಇನ್ನೊಬ್ಬ ಸ್ವಾಮಿಗಳನ್ನೂ, ಕುಮಾರಸ್ವಾಮಿಯವರು ಬೇರೆಯವರನ್ನೂ ಸಂದರ್ಶಿಸಿದರೆ ಮತ್ತು ಯಥಾಸಹಜವಾಗಿ ಘಟಿಸುವ ರಾಜಕೀಯ ವಿದ್ಯಮಾನದಲ್ಲಿ ಒಬ್ಬರಿಗೆ ಮೇಲುಗೈ, ಇನ್ನೊಬ್ಬರಿಗೆ ಸೋಲೂ ಉಂಟಾದರೆ, ಅದನ್ನು ಆಯಾಯಾ ಮಠಗಳು ಪ್ರತಿಪಾದಿಸುವ ಆಧ್ಯಾತ್ಮಿಕ ತತ್ವ-ಸಿದ್ಧಾಂತಗಳ ಸೋಲು-ಗೆಲುವೆಂದು ಸಾಮಾನ್ಯರು ಒಪ್ಪಿಕೊಳ್ಳಬೇಕೇ?!

ಕರೆ: 9448047559 ವಿ-ಅಂಚೆ ಬ್ಲಾಗ್

2 ಕಾಮೆಂಟ್‌ಗಳು:

  1. ರಾಜಕೀಯವು ಧರ್ಮದೊಳಗೂ ಧರ್ಮವು ರಾಜಕೀಯದೊಳಗೂ ನೀರಕ್ಷೀರದಂತೆ ಬೆರೆತುಹೋಗಿರುವಾಗ ಧಾರ್ಮಿಕತೆ ನೆಲೆತಪ್ಪಿ ಪರಕೀಯವಾಗುವುದರಲ್ಲಿ ಸಂದೇಹವೇನು?

    ಪ್ರತ್ಯುತ್ತರಅಳಿಸಿ
  2. ಕ್ಷಮಾಶೀಲತೆ, ಉದಾತ್ತತೆ, ಶಾಂತಿ-ಸಹಬಾಳ್ವೆಗಳು ಧರ್ಮದ ಬೊಧನೆ ಮತ್ತು ಪ್ರೇರಣೆ.ರಾಜಕಿಯವಾದರೋ ಷಂಡ ಮತ್ತು ಸರ್ವನಾಶಕ. ಅದೇ ಹಗಲು ವೇಷ ಧರಿಸಿ ಪೀಠದ ಮೇಲೆ ವಿರಾಜಿಸಿರುವುದು ದುರಂತ. ಶಿಷ್ಯ ವರ್ಗವೆಂಬ ಸಮುದಾಯ ಧಾರ್ಮಿಕ 'ಕಾಮನ್ಸೆನ್ಸ್' ಬೆಲೆಸಿಕೊಳ್ಲುವುದೊಂದೇ ಇದಕ್ಕೆ ಪರಿಹಾರ. ಗಮನಿಸಿದ್ದಕ್ಕೆ ಧನ್ಯವಾದ

    ಪ್ರತ್ಯುತ್ತರಅಳಿಸಿ